5dd548679a8e81bda5ca4b23b9f1d148b8eede38bb8950cec2 AgroWiki : Online Agriculture Library: ಭವಿಷ್ಯದ ಕೃಷಿಕರು ಯಾರು

Thursday, 3 November 2016

ಭವಿಷ್ಯದ ಕೃಷಿಕರು ಯಾರು


ಭವಿಷ್ಯದ ಕೃಷಿಕರು ಯಾರು , ಕೃಷಿ


ಕೃಷಿ ಪ್ರದಾನವಾದ ನಮ್ಮ ದೇಶದಲ್ಲಿ ಶೇ. 80 ರಷ್ಟು ಹಳ್ಳಿಗಳಿವೆ ಆದ್ದರಿಂದಲೇ ಗಾಂಧೀಜಿ ನಮ್ಮ್ ದೇಶವನ್ನು ಹಳ್ಳಿಗಳ ದೇಶ ಎಂದು ಕರೆದಿದ್ದಾರೆ. ಭಾರತದಲ್ಲಿ ಕೃಷಿಯೇ ಮೂಲ ಕಸುಬು ,ಕೃಷಿ ಇಂದು ಜೀವಂತವಾಗಿರುವುದರಿಂದಲೇ ನಾವು ಬದುಕುಳಿಯಲು ಸಾಧ್ಯವಾಗಿದೆ ಇಂತಹ ಸಂದರ್ಭದಲ್ಲಿ ನಾವು ರೈತರನ್ನು ನೆನೆಯುವುದರ ಜೊತೆಗೆ ಅವರ ಸದ್ಯದ ಪರಿಸ್ಥಿತಿಯನ್ನು ಗಮನಿಸಬೇಕಾಗಿದೆ. ಇಂದು ರೈತನ ಜೀವನವೇ ಬೆಲೆ ಕಳೆದುಕೊಳ್ಳುತಿದ್ದು ಕೃಷಿ ಅವನೀತಿಯ ಅಂಚಿಗೆ ತಲುಪುತ್ತಿದೆ. ಕೃಷಿಯೇ ಪ್ರಧಾನವಾದ ನಮ್ಮದೇಶದಲ್ಲಿ ಈ ರೀತಿ ಬದಲಾಗಲು ಕಾರಣಗಳು ಏನೆಂಬುದನ್ನು ಅವಲೋಕಿಸುವುದು ಬಹಳ ಅನಿವಾರ್ಯವಾಗದೆ.

ಹಿಂದೆ ಸಾಂಪ್ರೆದಾಯಕ ಮತ್ತು ಸುಸ್ಥಿರ ಕೃಷಿಗೆ ನಮ್ಮ ದೇಶದಲ್ಲಿ ಹೆಚ್ಚಿನ ಮಾನ್ಯತೆಯಿತ್ತು.80ರ ದಶಕದ ವರಗೆ ಕೃಷಿಯಲ್ಲಿ ಸಾಂಪ್ರದಾಯಾ ಪದ್ದತಿಯಿದ್ದುದ್ದರಿಂದ ರೈತರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು ,ಆಗ ರೈತ ಸ್ವಾವಲಂಬಿಯಾಗಿದ್ದ .ತಾನು ಬೆಳುದುದ್ದರಲ್ಲಿ ತನಗೆ ಅಗತ್ಯವಿದ್ದಷ್ಟನ್ನು ಉಳಿಸಿಕೊಂಡು ಮಿಕ್ಕದ್ದನ್ನು ಮಾರಾಟ ಮಾಡುತ್ತಿದ್ದ , ಕೃಷಿಯಿಂದ ಏನನ್ನಾದರೂ ಸಾದಿಸಬಹುದು ಎಂಬ ಆತ್ಮಸ್ಥೈರ್ಯ ಅಂದಿನ ರೈತನಲ್ಲಿತ್ತು  ಕೃಷಿಯಿಂದ ನಾವು ಹಾಳಾಗುವುದಿಲ್ಲ ಎಂದು ಧೃಡವಾಗಿ ನಂಬಿದ್ದ  ಆದರೆ ಇಂದಿನ ರೈತ ಆ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡ್ಡಿದ್ದಾನೆ.

ಜಾಗತೀಕರಣದ ನಂತರ  ನಮ್ಮ ದೇಶದಲ್ಲಿ ಕೃಷಿ ಪದ್ದತಿ ಬಹಳಷ್ಟು ಬದಲಾಗಿದೆ .ಸಾವಯವ ಕೃಷಿಯನ್ನು ಮಾಡುತ್ತಾ ಬಂದಿದ್ದ ರೈತ ಈಗ ಎಕಾ ಏಕಿ ಆಧುನಿಕ ಕೃಷಿಯನ್ನು ಅಳವಡಿಸಿಕೊಂಡ್ಡಿದ್ದಾನೆ . ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೇ ಬೇಸಾಯ ಮಾಡಲಾರದಷ್ಟು  ಅದಕ್ಕೆ ಅವಲಂಬಿತನಾಗಿದ್ದಾನೆ. ಮಿತಿ ಮೀರಿದ ರಾಸಾಯನಿಕಗಳ ಬಳಕೆಯ ಪರಿಣಾಮ ಇಳುವರಿ ಕಡಿಮೆಯಾಗುವುದರ ಜೊತೆಗೆ ,ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ . ಇಂದು ರೈತರು ಮಾರುಕಟ್ಟೆಯ ದ್ರಿಷ್ಟಿಯಲ್ಲಿ ಬೆಲೆ ಬೆಳೆಯುತ್ತಿದ್ದಾರೆ , ಆದರೆ ಸರಿಯಾದ ಮಾರುಕಟ್ಟೆ ಬೆಲೆಯಿಲ್ಲದೆ ಭಾವನೆ ಪಡುತ್ತಿದ್ದಾರೆ , ಜೊತೆಗೆ ರೈತರನ್ನು ಅಭಿವೃದ್ಧಿ ಪಡಿಸುತ್ತೇವೆ ಎನ್ನುವ ಸರ್ಕಾರಗಳು ಬಂಡವಾಳಶಾಹಿಗಳೊಂದಿಗೆ ಪರೋಕ್ಷ ಹಾಗು ಪ್ರತ್ಯಕ್ಷವಾಗಿ  ಕೈಗಾರಿಕೆ , ಭೂ-ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಯೇತರ ಉದ್ದೇಶಕ್ಕೆ ರೈತರ ಭೂಮಿಯನ್ನು ಕಬಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ .
ದಶಕಗಳ ಹಿಂದೆ ಎತ್ತ ನೋಡಿದರು ಹಚ್ಚ ಹಸಿರು ಹೊಲ , ಗದ್ದೆ ಹಾಗು ತೋಟಗಳು ಎದ್ದು ಕಾಣುತ್ತಿದ್ದ ಜಾಗದಾಳಿಯಿ ಇಂದು ಎತ್ತ ನೋಡಿದರು ಮುಗಿಲು ಮುತುವ ಕಾಂಕ್ರೀಟ್ ಕಾಡುಗಳು ತಲೆಯೆತ್ತುತ್ತಲೇ ಸಾಗಿವೆ. ಬೆಳೆಯುತ್ತರುವ ಸ್ಪರ್ದಾದ್ಮಕ ಜಗತ್ತಿನಲ್ಲಿ ಎಲ್ಲವು ಅನಿವಾರ್ಯವೇ ಆದರೂ ಜೀವೇಕೋಟಿಗೆ ಗಾಳಿ , ನೀರು ಹಾಗು ಆಹಾರಕ್ಕೆ ಪ್ರಥಮ ಆದ್ಯತೆ ನೀಡುವುದು ಅತ್ಯವಶ್ಯಕ  ಭೂ ಅಭಿವೃದ್ಧಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಯ ಪರಿಣಾಮವಾಗಿ ಕೃಷಿಭೂಮಿ ಕ್ಷೀಣಿಸುತ್ತಿರುವುದರ ಜೊತೆಗೆ ಪರಿಸರ ನಾಶವಾಗುವ ಕಾರಣ ಮುಂದಿನ ದಿನಗಳಲ್ಲಿ ನಮ್ಮ್ ಮನೆಗಳ ಬೆಡ್‌ರೂಮ್ ಹಾಲ್ಗಳಲ್ಲಿ ನಮ್ಮ್ ಆಹಾರವನ್ನು ಬೆಳೆದು ತಿನ್ನುವ ಪರಿಸ್ತಿತಿ ಬರುವುದರಲ್ಲಿ ಎರಡು ಮಾತಿಲ್ಲ.