5dd548679a8e81bda5ca4b23b9f1d148b8eede38bb8950cec2 AgroWiki : Online Agriculture Library: ಕೃಷಿ ಕುಸುರಿಯಲ್ಲಿ ಮಹಿಳೆಯ ಕಾಣದ ಕೈಗಳು

Sunday, 4 December 2016

ಕೃಷಿ ಕುಸುರಿಯಲ್ಲಿ ಮಹಿಳೆಯ ಕಾಣದ ಕೈಗಳು


role of women in agriulture

ಭಾರತ ಕೃಷಿ ಪ್ರದಾನ ದೇಶ, ಶೇಕಡ 60 ಭಾರತದ ಜನಸಂಖ್ಯೆ ಕೃಷಿಗೆ ಅವಲಂಬಿತವಾಗಿ ಜೀವನ ನಡೆಸುತ್ತಿದೆ. ನಾಡಿಗೆ ಅನ್ನವನ್ನು ನೀಡುವ ರೈತನೇ ದೇಶದ ಬೆನ್ನೆಲುಬು . ಮಣ್ಣಿಗೆ ಅನ್ನದಾತನ ಬೆವರಿನ ಹನಿಗಳ ಸ್ಪರ್ಶದ ನಂತರವೇ ಬೆಳೆಯೊಳಗಿನ ಕಾಳಾಗಿ ಮಣ್ಣು ಮಾತಾಡಬಲ್ಲುದು, ಅಪಾರ ಜನಸಂಖ್ಯೆಯ ಈ ರಾಷ್ಟ್ರಕ್ಕೆ ಅನ್ನ ನೀಡಲು ಸಾದ್ಯವಾಗುವುದು, ಪ್ರತಿಷ್ಟಿತ ಕಾರ್ಖಾನೆಗಳಲ್ಲಿ, ಮಹಾನ್ ಮಹಲುಗಳಲ್ಲಿ ತಯಾರಿಸಲಾಗದಂತಹ ಆಹಾರವನ್ನು ಹೊಲವೆಂಬ ನೆಲದಿಂದ ಬೆಳೆತೆಗೆಯುವ ಮನುಕುಲದ ಮಹಾದೀಪ, ರೈತನಿಗೆ ಬೆನ್ನೆಲುಬಾಗಿ, ಕೃಷಿಯ ಎಲ್ಲಾ ಕಾರ್ಯಗಳಲ್ಲೂ ತನ್ನ ಕುಶಲತೆಯನ್ನು ಬೆರೆಸುವ ಮಹಿಳೆಯ ಪಾತ್ರ ಭಾರತೀಯ ಕೃಷಿಯಲ್ಲಿ ಮಹತ್ತ್ರವಾದ್ದುದಾಗಿದೆ."ಯಾವುದೇ ರಾಷ್ಟ್ರದ ಪರಿಸ್ಥಿಯನ್ನು ಆ ರಾಷ್ಟ್ರದ ಮಹಿಳೆಯರಿಗಿರುವ ಸ್ಥಾನಮಾಂಗಳನ್ನು ನೋಡಿಯೇ ಹೇಳಬಹುದು" ಎಂದು "ಜವಾಹರ್ ಲಾಲ್ ನೆಹರು" ಅವರ ಮಾತುಗಳಿಂದ ಮಹಿಳೆಯ ಮಹತ್ಟವಾದ ಸ್ಥಾನ, ಸಮಾಜ ಮಹಿಳೆಗೆ ನೀಡಬೇಕಾದ ಗೌರವಗಳ ಬಗೆಗೆ ಅರಿವಾಗುತ್ತದೆ. ನಮ್ಮೆಲ್ಲರ ಜೀವನದಲ್ಲಿ, ತಾಯಿಯಾಗಿ, ಸೋದರಿಯಾಗಿ, ಮಡದಿಯಾಗಿ, ಮಗಳಾಗಿ, ಗೆಳತಿಯಾಗಿ ಎಲ್ಲಾ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮಹಿಳೆಯು, ದೇಶದ ಕೃಷಿಯ ಸುಂದರ ಕುಸುರಿಯನ್ನು ನೇಯುತ್ತಿರುವುದು , ಕೃಷಿಯನ್ನು ಮುನ್ನಡೆಸುತ್ತಿರುವುದರಲ್ಲಿ ಬಹುಪಾಲು ಮಹಿಳೆಯ ಆಪಾರ ಪರಿಶ್ರಮದಲ್ಲಿ ಅಡಗಿದೆ. ಅಬಲೆಯಲ್ಲ-ಸಬಳೆಯೆಂದು ನಿರೂಪಿಸಲು, ಹೆಣ್ಣು, ಕೃಷಿಯಿಂದ ಹಿಡಿದು, ಗಗನಯಾತ್ರಿಯವರೆಗಿನ ಕೆಲಸಗಳನ್ನು ಹೆಮ್ಮೆಯಿಂದ ನಿರ್ವಹಿಸುತ್ತಿದ್ದಾಳೇ.

"Women Feed the World" ಎನ್ನುವ ಆಂಗ್ಲ ಘೋಷಣೆ ಮಹಿಳೆಯ ಉನ್ನತ ಜವಾಬ್ಧಾರಿಯನ್ನು ನಿರ್ವಹಿಸುತ್ತಿರುವುದನ್ನು ಹೇಳುತ್ತದೆಯಾದರೂ, ಪರಿಶಯ ತಕ್ಕು ಮನರೆಯಾಗಲಿ, ವೇತನವಾಗಲಿ ದೊರೆಯುತ್ತಿಲ್ಲ ಕಹಿಯಾದರೂ ಸತ್ಯವಾಗಿದೆ. ಭಾರತದಲ್ಲಿ ಶೇಕಡ 80 ರಷ್ಟು ಮಹಿಳೆಯರು ಕೃಷಿಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಬೀಜ ಬಿತ್ತುವುದರಿಂದ ಹಿಡಿದು, ಬೆಲೆಯೂ ಕೊಯ್ಲಾಗಿ, ಕಾಳು ಒಕ್ಕಣೆ ಮಾಡುವವರೆಗೂ ಕೃಷಿಯಲ್ಲಿ ಮಹಿಳೆಯ ಪಾತ್ರವಿದೆ. ನೇಗಿಲು ಹಿಡಿದು ಹೊಲದಲ್ಲಿ ಉಳುವ ರೈತ ಗಂಡಸಾದರೂ, ಎತ್ತುಗಳನ್ನು ಗದ್ದೆಯ ಬದಿಗೆ ಕೊಂಡೊಯ್ದು ನೂಗ-ನೇಗಿಲುಗಳನ್ನು ಏರಿಸಲು ಸಹಾಯಕಳಾಗೂವುದ್ದಲ್ಲದೆ, ಉಳುಮೆಯ ಸಾಲುಗಳನ್ನು ಗುರುತಿಸಲು ಇನ್ನೂ ಕೆಲವೊಮ್ಮೆ ಉಳುಮೆಗೆ ಹೂರಿ-ಕೋನಗಳು ಎಲ್ಲಡೆ ಇರುವಾಗ ನೇಗಿಲಿಗೆ ಹೆಗಲನ್ನು ಒಡ್ಡುವ ಕೆಲಸವನ್ನೂ ಸಹ ನಿರ್ವಹಿಸುತ್ತಾಳೆ.
ಕೃಷಿ ಮಹಿಳೆಯ ದುಡಿಮೆಯಲ್ಲಿನ ಸೂಕ್ಷ್ಮತೆ, ಕೆಲಸದ ಗ್ರಹಿಕೆ, ನೈಪುಣ್ಯತೆ, ತಾಳ್ಮೆ, ಶ್ರೆದ್ದೆ, ಕೃಷಿಯ ಅಭಿವೃದ್ಧಿಯಲ್ಲಿ ತಣ್ನ್ಡೆಯಾದ ಪ್ರಭಾವವನ್ನು ಬೀರಿದೆ. ಕಳೆ ನಿರ್ವಹಣೆಯ ಕಾರ್ಯ ಹೆಣ್ಣಿಗೆ ಮೀಸಲಾಗಿದೆ ಎನ್ನುವಷ್ಟರ ಮಟ್ಟಿಗೆ ಕಳೆಯ ಕೆಲಸವನ್ನು ಇಂದು ಕೃಷಿ ಮಹಿಳೆ ನಿರ್ವಹಿಸುತ್ತಿದ್ದಾಳೆ . ಕಸರತ್ತಿನ ಆಟದಂತೆ ಗೂಚರಿಸುವ ಪೈರು ಕೊಯ್ಲು ಆದಮೇಲೆ ಭತ್ತವನ್ನು ಕಳೆದು ಹುಲ್ಲು ವಕ್ಕಣೆ ಮಾಡುವವರು ಮಹಿಳೆಯರೇ. ಗದ್ದೆಯ ಪೈರನ್ನು ಕೊಯ್ದು ಸೂಡಿಯಲ್ಲಿ ಕಟ್ಟಿ ಅದನ್ನು ಬಿಡಿಸಿ ಇಡುವ ಕಲಾವಂತಿಕೆ ಮಹಿಳೆಗೆ ಸಿದ್ಧವಾಗಿದೆ.ಧಾನ್ಯ ಸಂಗ್ರಹಣೆ ಮತ್ತು  ಒಕ್ಕಣೆಯನ್ನು ನಿರ್ವಹಿಸುವಾಗ ಧಾನ್ಯವನ್ನು ತೂರುವ, ಗಾಳಿಯ ಗುರುತಿಸಿ ಕಸವನ್ನು ತೂರಿ ಕಾಳನ್ನು ಸಂಗ್ರಹಿಸುವ, ಹಗೇವುಗಳಲ್ಲಿ ಧಾನ್ಯವನ್ನು ತುಂಬುವ ಎಲ್ಲಾ ಕಾರ್ಯಗಳನ್ನು ಮಹಿಳೆ ನಿರ್ವಹಿಸುತ್ತಿದ್ದಾಳೆ. ಮಾಡುವ ಕೆಲಸದಲ್ಲಿ ತನಗೆಷ್ಟು ಮಾನ್ಯತೆ ಸಿಗುತ್ತದೆ ಎನ್ನುವುದನ್ನು ಲೆಕ್ಕಿಸದೆ, ಕುಟುಂಬದ ಹಿತವನ್ನು ಗಮನಿಸುವ ಮನಃಸ್ಥಿತಿ, ಗಂಡಿಗಿಂತ ಹೆಣ್ಣಿಗೆ ಜಾಸ್ತಿ ಎಂದರೆ ತಪ್ಪಾಗಲಾರದು.
ಕೃಷಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಮಹಿಳೆಯನ್ನು ನಾಲ್ಕು ತೆರನಾಗಿ ವಿಂಗಡಿಸಬಹುದು.

1.ಆಹಾರ ಉತ್ಪಾದಕರು   (Independent producers)
2.ಕೃಷಿ ಕಾರ್ಯಗಳ ಪಾಳುಧಾರರು  (Agricultural partners)
3.ಕೃಷಿ ಗೃಹಿಣಿ  (Farm home women)
4.ಕೃಷಿ ಕಾರ್ಯಗಳಲ್ಲಿ ಸಹಾಯಕರು (Agricultural Helpers).

ಮಹಿಳೆಯ ಪಾತ್ರ ಕೃಷಿಯಲ್ಲಿ ಅತ್ಯಂತ ಅವಶ್ಯಕ್ವಾಗಿದ್ದರು, ಅನೇಕ ಕಾರಣಗಳಿಂದ ಮಹಿಳೆಯ ಋಷಿ ಚಟುವಟಿಕೆಗಳನ್ನು ಗುರುತಿಸಲಾಗುತ್ತಿಲ್ಲ.


  • ಕಳೆ ತೆಗೆಯುವುದು, ಕಾಳು ಹನಸು ಮಾಡುವುದು, ಸಸಿ ನೆಡುವುದು ಮುಂತಾದ ಪ್ರಮೂಕ ಕೆಲಸಗಳನ್ನು ಚಿಕ್ಕ ಕೆಲಸಗಳೆಂದು ಭಾವಿಸಿ ಮಹಿಳೆಯೇ ಈ ಕೆಲಸಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುವುದು.
  • ಬಹುತೀಕ ಕೃಷಿ ಭೂಮಿಗೆ ಪುರುಷನೇ ಎಜಮಾನನಾಗಿರುವುದು.
  • ಮಹಿಳೆ ಕೆಲಸಗಾರರಿಗೆ ಕಡಿಮೆ ವೇತನ.
  • ಮಹಿಳೆಯ ಕೃಷಿ ಕೆಲಸಗಳನ್ನು ಪರಿಗಣಿಸದೆ ಇರುವುದು.
  • ಯಾವುದೇ ಕೃಷಿ ತರಬೇತಿ ಕಾರ್ಯಕ್ರಮಗಳಲ್ಲಿ ಮಹಿಳೆಯ ಕಡಿಮೆ ಹಾಜರಾತಿ.
  • ಪುರುಷ ಕೆಂದ್ರಿತ ತಂತ್ರಜ್ಞಾನಗಳು.
  • ಅಪೌಷ್ಟಿತ ಮಹಿಳೆಯರು ಇನ್ನೂ ಅನೇಕ ಕಾರಣಗಳಿಂದ ಮಹಿಳೆಯ ಕೃಷಿ ಕೆಲಸ ಪುರುಷನ ಕೃಷಿ ಕೆಲಸಗಳಷ್ಟು ಮಾನ್ಯತೆ ಪಡೆದಿಲ್ಲ.


ಕೃಷಿ ವಿಸ್ತರಣಾ ಕಾರ್ಯಕ್ರಮಗಳಲ್ಲಿ, ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರಿಂದ, ಮಹಿಳೆಯ ಸೇವಾಮನೋಭಾವ, ಹಣ ಉಳಿಸುವಂತಹ ಗುಣ, ಸಹಕಾರ ಮುಂತಾದ ಕಾರಣಗಳಿಂದ ಯಶಸ್ವಿಯಾಗಿರುವ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ  ಮೂಲಕ, ಕೃಷಿ ಮಹಿಳೆಯನ್ನು ಕೃಷಿಯ ಪ್ರಗತಿಯನ್ನು ಸಾಧಿಸಬಹುದು.
ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಹಿಳಾ ವಿಜ್ಞಾನಿಗಳನ್ನು ನೀಮಿಸುವುದರ ಮೂಲಕ, ಗ್ರಾಮೀಣ ಪ್ರದೇಶ ಕೃಷಿ ಮಹಿಳೆಯರಿಗೆ ಸಹಕಾರಿ ಆಗುತ್ತದೆ.
ತೊಟ್ಟಲೊಳಗಿನ ಮಗಿವಿನಿಂದ ಹಿಡಿದು, ಕೊಟ್ಟಿಗೆ ಹಸುವಿನ ಹಸಿವನ್ನು, ನೀರು, ನೋಡಿಕೊಳ್ಳುವ ಮಹಿಳೆಯ ಕೃಷಿ ಚಟುವಟಿಕೆಗಳನ್ನು ಗುರುತಿಸಬೇಕಾಗಿದೆ. ಮನೆಯಲ್ಲೂ, ಹೊಲದಲ್ಲೂ ದುಡಿಯುವ ಕೃಷಿ ಮಹಿಳೆಗೆ ಸಹಾಯಕಾರಿಯಾಗಲು ಕೃಷಿ ಯಂತ್ರೋಪಕರಣಗಳನ್ನು ತಯಾರಿಸುವಲ್ಲಿ ಪ್ರಗತಿ ಹೊಂದಬೇಕಾಗಿದೆ.
ಕೃಷಿಯಲ್ಲಿ ರೈತ ಬೇಸತ್ತು, ಜೀವನವೇ ದುರ್ಬರವೆನಿಸಿ ಆತ್ಮಹತ್ಯಾ ವಿಚಾರಕ್ಕೆ ಕೈ ಹಾಕಿದಾಗ ಅರ್ಧಾಂಗಿಯಾಗಿ ಮಾಣೂಸ್ಟೈರ್ಯ ತುಂಬುವ, ಕೆಲವೊಮ್ಮೆ ನೇಗಿಲಿಗೆ ಎತ್ತಾಗಿ ದುಡಿದು, ಬಿದ್ದು ಹೋದ ಬದುಕನ್ನು ಮತ್ತೆ ಕಟ್ಟಿಕೊಡುವ ಗಟ್ಟಿಗಿತ್ತಿ ಕೃಷಿ ಮಹಿಳೆಯ ಮನೊಬಲವನ್ನು ಮೆಚ್ಚಬೇಕಾಗಿದೆ. ಅಂತಹ ಕೃಷಿ ಮಹಿಳೆಗೆ ಬಿರುದು, ಪ್ರಶಸ್ತಿ, ಸನ್ಮಾನ ಬೇಕಾಗಿರುವುದಿಲ್ಲ. ಸುಂದರ ನೇಯುತ್ತಿರುವುದರ ಹಿಂದಿರುವ ಆ ಕೃಷಿ ಮಹಿಳೆಯ ಕೈಗಳ ಪರಿಶ್ರಮವ ನಾವು ಅರಿತು ಸಹಕಾರಿಯಾಗಿ ನಿಂತರೆ ಸಾಕಲ್ಲವೇ.??